ಲೆಫ್ಟಿನೆಂಟ್ ಜನರಲ್ ವಿ. ಕೆ. ನಾಯರ್ (ಮರಣ ನವೆಂಬರ್ ೩೦ ೨೦೧೫) ಅವರು ಪರಮ ವಿಶಿಷ್ಟ ಸೇವಾ ಪದಕ, ಸೇವಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ಮಾಜಿ ಅಧಿಕಾರಿ ಮತ್ತು ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿದ್ದರು. ಸೈನ್ಯದಲ್ಲಿದ್ದಾಗ, ಅವರು ಪದಾತಿದಳದಲ್ಲಿ ಪ್ಯಾರಾಟ್ರೂಪರ್ ಆಗಿ, ಕೌಂಟರ್‌ ಇನ್ಸರ್ಜೆನಿ ಮತ್ತು ಸೇನಾ ಕಮಾಂಡರ್ ಆಗಿ (ಜಿಒಸಿ-ಇನ್-ಸಿ, ವೆಸ್ಟರ್ನ್ ಕಮಾಂಡ್) ಸೇವೆ ಸಲ್ಲಿಸಿದ್ದರು. == ವೈಯಕ್ತಿಕ ಜೀವನ == ಅವರು ಸಾಜ್ನಿ ನಾಯರ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಓರ್ವ ಪುತ್ರ (ಅವರೂ ಕೂಡ ಅಧಿಕಾರಿ) ಹಾಗೂ ಓರ್ವ ಪುತ್ರಿಯನ್ನು ಒಳಗೊಂಡಂತೆ ಇಬ್ಬರು ಮಕ್ಕಳಿದ್ದರು. ಅವರು ೨೦೧೫ರ ನವೆಂಬರ್ ೩೦ ರಂದು ನಿಧನರಾದರು. == ಗ್ರಂಥಸೂಚಿ == ಫ್ರಂ ಫೆಟಿಗ್‌ ಟು ಸಿವೈವ್ಸ: ಮೆಮೊರೀಸ್‌ ಆಫ್‌ ಎ ಪ್ಯಾರಾಟ್ರೂಪರ್‌ (೨೦೧೩) == ಉಲ್ಲೇಖಗಳು ==